ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಚಿಣ ್ಣರ ಅಂಗಳಕ್ಕೆ ಚಾಲನೆ

Rashmi Kasaragodu
Updated On : 25 Apr 2014, 12:20 pm

ಹಾವೇರಿ:  ತಾಲೂಕಿನ ಕುರುಬಗೊಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ರಲ್ಲಿ ಇತ್ತಿಚೀಗೆ ಪ್ರಸಕ್ತ ಸಾಲಿನ ಚಿಣ್ಣರ ಅಂಗಳ ಕಾರ್ಯಕ್ರಮ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷ ಪುಟ್ಟಪ್ಪ ಬಡಕರಿಯಪ್ಪನವರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಸಮೂಹ ಸಂಪನ್ಮೂಲ ಕೇಂದ್ರದ ಸಂಯೋಜಕ ಕೆ.ಆರ್. ಹಿರೇಮಠ ಮಾತನಾಡಿ, ಶಾಲೆಯಿಂದ ಹೊರಗುಳಿದ ಹಾಗೂ ಶಾಲೆ ಬಿಟ್ಟ ಮಕ್ಕಳಿಗಾಗಿ ಮೂರು ತಿಂಗಳ ಚಿಣ್ಣರ ಅಂಗಳದಲ್ಲಿ ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಾಗೂ ಸಹ ಪಠ್ಯ ಚಟುವಟಿಕೆ ಮತ್ತು ವಿಷಯ ಬೋಧನೆ ಮಾಡಿ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಲಾಗುತ್ತದೆ ಎಂದು ತಿಳಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕ ಸಿ.ಜಿ. ಮಠಪತಿ ಹಾಗೂ ಶಿಕ್ಷಕ ಇ.ಸಿ. ಅಗಸಿಬಾಗಿಲ ಚಿಣ್ಣರ ಅಂಗಳದ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕಲಿಕೋಪಕರಣಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯ ಶಿವಕುಮಾರ ಮತ್ತಿಹಳ್ಳಿ, ಗ್ರಾಮಸ್ಥರಾದ ಮಹಾದೇವಪ್ಪ ಪಾಟೀಲ, ವಿರೂಪಾಕ್ಷಪ್ಪ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೇಂದ್ರ ಸ್ವಯಂ ಸೇವಕರಾಗಿ ಎಸ್.ಬಿ. ಮತ್ತಿಹಳ್ಳಿ ಅವರು ನೇಮಕ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement